ಸುದೀಪ್ ರಾಗಿಣಿ ದ್ವಿವೇದಿ ಜೋಡಿ ಮತ್ತೆ ಬೆಳ್ಳಿ ತೆರೆ ಮೇಲೆ | Filmibeat Kannada

2017-12-15 2

Kannada actor Sudeep made a special appearance in Actress Ragini Dwivedi's 'Kichu' Kannada Movie. The movie is directed by Prashanth Raj.


ನಟ ಸುದೀಪ್ ಮತ್ತು ರಾಗಿಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದು. ಸುದೀಪ್ ಎತ್ತರಕ್ಕೆ ಸರಿ ಹೊಂದುವ ಸ್ಯಾಂಡಲ್ ವುಡ್ ನಟಿ ಅಂದರೆ ಅದು ರಾಗಿಣಿ. ಮೊದಲು 'ವೀರ ಮದಕರಿ' ಸಿನಿಮಾ ಮಾಡಿ ಗೆದ್ದ ಈ ಜೋಡಿ 'ಕೆಂಪೇಗೌಡ' ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿತ್ತು. ಆದರೆ ಈಗ 'ಕೆಂಪೇಗೌಡ' ಸಿನಿಮಾದ ನಂತರ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ರಾಗಿಣಿ ಇಬ್ಬರು ನಟಿಸುತ್ತಿದ್ದಾರೆ. ಆದರೆ ಈ ಇಬ್ಬರು ಜೋಡಿಯಾಗಿ ಚಿತ್ರದಲ್ಲಿ ನಟಿಸುತ್ತಿಲ್ಲ. ರಾಗಿಣಿ ಅವರ ಹೊಸ ಸಿನಿಮಾ 'ಕಿಚ್ಚು' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ.ರಾಗಿಣಿ ನಟನೆಯ 'ಕಿಚ್ಚು' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿತ್ತು. ಆದರೆ ಆ ಸಿನಿಮಾದ ಸುದ್ದಿ ಇಷ್ಟು ದಿನ ಇರಲಿಲ್ಲ. ಈಗ ಈ ಚಿತ್ರ ಮತ್ತೆ ಸುದ್ದಿ ಮಾಡಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ.

Videos similaires